ಮನೆಯಲ್ಲಿ ಮಗಳು ಅಥವಾ ಮಗನಿಗೆ ಮದುವೆ ವಯಸ್ಸು ದಾಟುತ್ತಿದ್ದರೂ, ಇನ್ನೂ ಸಂಬಂಧಗಳು ಕೂಡಿ ಬರ್ತಿಲ್ಲ ಅಂತ ಪೋಷಕರು ನೊಂದುಕೊಂಡಿರುತ್ತಾರೆ. ಎಷ್ಟೋ ಕಡೆ ಹೆಣ್ಣು ನೋಡೋಕೆ ಹೋಗಿರ್ತಾರೆ, ಎಲ್ಲವೂ ಸರಿ ಇರುತ್ತೆ, ಆದ್ರೆ ಕೊನೆಗಳಿಗೆಯಲ್ಲಿ ಏನೋ ಕಾರಣಕ್ಕೆ ಮುರಿದು ಬೀಳುತ್ತೆ.
ಇದಕ್ಕೆ ಕಾರಣ ಜಾತಕದಲ್ಲಿರುವ ದೋಷಗಳು ಅಥವಾ ಗ್ರಹಗಳ ಅಡೆತಡೆ ಇರಬಹುದು. ಅಂತಹ ಎಲ್ಲ್ ಅಡೆತಡೆಗಳನ್ನು ನಿವಾರಿಸಿ, ಆದಷ್ಟು ಬೇಗ ಮದುವೆ ಫಿಕ್ಸ್ ಮಾಡಿಸುವ ಶಕ್ತಿ ಇರೋದು ಈ “ಸ್ವಯಂವರ ಪಾರ್ವತಿ ಮಂತ್ರ”ಕ್ಕೆ ಮಾತ್ರ.
ಸಾಕ್ಷಾತ್ ಪಾರ್ವತಿ ದೇವಿಯೇ ಶಿವನನ್ನು ಪಡೆಯಲು ಈ ಮಂತ್ರವನ್ನು ಜಪಿಸಿದ್ಲು ಅಂದ್ರೆ, ಇದರ ಪವರ್ ಎಷ್ಟಿರಬಹುದು ಅಂತ ನೀವೇ ಊಹಿಸಿ. ಇದನ್ನ ಹೇಗೆ ಓದಬೇಕು ಮತ್ತು ಮಂತ್ರ ಯಾವುದು ಅಂತ ಇಲ್ಲಿದೆ ನೋಡಿ.
ಏನಿದು ಸ್ವಯಂವರ ಪಾರ್ವತಿ ಮಂತ್ರ?
ಹಿಂದೆ ಪಾರ್ವತಿ ದೇವಿಗೆ ಶಿವನೇ ಪತಿಯಾಗಿ ಬೇಕು ಎಂಬ ಆಸೆ ಇತ್ತು, ಆಗ ಆಕೆ ಈ ಮಂತ್ರವನ್ನು ಕಠಿಣವಾಗಿ ಜಪ ಮಾಡಿ ಶಿವನನ್ನು ಒಲಿಸಿಕೊಂಡಳು. ಅಂದಿನಿಂದ, ಮನಮೆಚ್ಚಿದ ಸಂಗಾತಿ ಬೇಕು ಅನ್ನುವವರು ಅಥವಾ ಮದುವೆ ಲೇಟ್ ಆಗ್ತಿರೋರು ಇದನ್ನ ಪಠಿಸಿದ್ರೆ ರಿಸಲ್ಟ್ ಗ್ಯಾರಂಟಿ.
ಇದು ಕೇವಲ ಮದುವೆ ಆಗದವರಿಗೆ ಮಾತ್ರ ಅಲ್ಲ, ಮದುವೆ ಆಗಿ ಗಂಡ-ಹೆಂಡತಿ ಮಧ್ಯೆ ಜಗಳ ಇದ್ರೂ ಇದನ್ನ ಓದಬಹುದು. ಇದು ದಂಪತಿಗಳ ಮಧ್ಯೆ ಪ್ರೀತಿಯನ್ನ ಜಾಸ್ತಿ ಮಾಡುತ್ತೆ ಮತ್ತು ಡಿವೋರ್ಸ್ ಆಗೋದನ್ನ ತಪ್ಪಿಸುತ್ತೆ.

ಯಾರು, ಯಾವಾಗ ಓದಬೇಕು?
ಮದುವೆ ಆಗಬೇಕಿರುವ ಹುಡುಗ ಅಥವಾ ಹುಡುಗಿ ಇಬ್ಬರೂ ಇದನ್ನ ಓದಬಹುದು. ಪೋಷಕರು ಕೂಡ ತಮ್ಮ ಮಕ್ಕಳ ಹೆಸರಿನಲ್ಲಿ ಸಂಕಲ್ಪ ಮಾಡಿ ಈ ಮಂತ್ರವನ್ನ ಹೇಳಬಹುದು.
ಸೋಮವಾರ ಅಥವಾ ಶುಕ್ರವಾರ ಬೆಳಿಗ್ಗೆ ಸ್ನಾನ ಮಾಡಿ, ಪಾರ್ವತಿ ಮತ್ತು ಶಿವನ ಫೋಟೋಗೆ ದೀಪ ಹಚ್ಚಿ, ಸಂಕಲ್ಪ ಮಾಡ್ಕೊಳ್ಳಿ. “ನನ್ನ ಮದುವೆ ವಿಘ್ನಗಳು ದೂರ ಆಗಲಿ” ಅಂತ ಪ್ರಾರ್ಥನೆ ಮಾಡಿ 108 ಬಾರಿ ಈ ಮಂತ್ರ ಜಪ ಮಾಡಿ.
ಎಷ್ಟು ದಿನಗಳಲ್ಲಿ ಫಲ ಸಿಗುತ್ತೆ?
ನಂಬಿಕೆ ಇಟ್ಟು ಸತತವಾಗಿ 48 ದಿನಗಳ ಕಾಲ (ಮಂಡಲ ಪೂಜೆ) ಈ ಮಂತ್ರವನ್ನ ಪಠಿಸಿದ್ರೆ, ಖಂಡಿತವಾಗಿಯೂ ಒಳ್ಳೆ ಸಂಬಂಧ ಹುಡುಕಿಕೊಂಡು ಬರುತ್ತೆ. ಹುಡುಗಿಯರು ಮುಟ್ಟಾದ ಸಮಯದಲ್ಲಿ (Periods) 5 ದಿನ ಗ್ಯಾಪ್ ಕೊಟ್ಟು, ನಂತರ ಮುಂದುವರಿಸಬಹುದು.
ಇದನ್ನ ಓದುವಾಗ ಮನಸ್ಸಿನಲ್ಲಿ ಪಾರ್ವತಿ ಪರಮೇಶ್ವರರ ಕಲ್ಯಾಣವನ್ನ ನೆನೆಸಿಕೊಳ್ಳಿ. ಒಳ್ಳೆ ಕೆಲಸ, ಒಳ್ಳೆ ಗುಣ ಇರುವ ಸಂಗಾತಿ ಸಿಗಲಿ ಅಂತ ಬೇಡ್ಕೊಳ್ಳಿ.
ಸ್ವಯಂವರ ಪಾರ್ವತಿ ಮಂತ್ರ (Mantra Lyrics)
ಇಲ್ಲಿದೆ ಆ ಶಕ್ತಿಶಾಲಿ ಮಂತ್ರ. ಇದನ್ನ ತಪ್ಪು ಇಲ್ಲದ ಹಾಗೆ ಸ್ಪಷ್ಟವಾಗಿ ಓದಿ.
ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗ ಭಯಂಕರಿ ಸಕಲ ಸ್ಥಾವರ ಜಂಗಮಸ್ಯ ಮುಖ ಹೃದಯಂ ಮಮ ವಶಂ ಆಕರ್ಷಯ ಆಕರ್ಷಯ ಸ್ವಾಹಾ
ಮಂತ್ರದ ಅರ್ಥ ಏನು?
“ಓ ಯೋಗಿನಿ, ಯೋಗೇಶ್ವರಿಯೇ, ಇಡೀ ಪ್ರಪಂಚದ ಸಕಲ ಜೀವರಾಶಿಗಳ ಮನಸ್ಸು ಮತ್ತು ಹೃದಯವನ್ನು ನಿಯಂತ್ರಿಸುವ ತಾಯೇ, ನನ್ನ ಇಷ್ಟಾರ್ಥವನ್ನು ಪೂರೈಸು ಮತ್ತು ನನ್ನ ಬಾಳ ಸಂಗಾತಿಯನ್ನು ನನ್ನತ್ತ ಆಕರ್ಷಿಸು.”
ಇದು ತುಂಬಾ ಪವರ್‌ಫುಲ್ ಆಕರ್ಷಣಾ ಮಂತ್ರ. ಇದು ನಿಮ್ಮ ಮನಸ್ಸಿಗೆ ಇಷ್ಟವಾಗುವ ಮತ್ತು ನಿಮಗೆ ಹೊಂದಾಣಿಕೆ ಆಗುವ ವ್ಯಕ್ತಿಯನ್ನು ನಿಮ್ಮ ಲೈಫ್ ಗೆ ಎಳೆದು ತರುತ್ತದೆ.
ದಾಂಪತ್ಯ ಸಮಸ್ಯೆಗೂ ಇದೇ ಪರಿಹಾರ
ಮದುವೆಯಾಗಿ ಪ್ರತಿದಿನ ಮನೆಯಲ್ಲಿ ಜಗಳ ನಡೀತಿದ್ರೆ, ಅಥವಾ ಗಂಡ-ಹೆಂಡತಿ ದೂರ ದೂರ ಇದ್ರೆ, ಅವರು ಕೂಡ ಈ ಮಂತ್ರವನ್ನ ಹೇಳಬಹುದು. ಇದು ಸಂಬಂಧದಲ್ಲಿರೋ ಕಹಿ ಭಾವನೆಯನ್ನ ಹೋಗಲಾಡಿಸಿ, ಮತ್ತೆ ಪ್ರೀತಿ ಹುಟ್ಟುವಂತೆ ಮಾಡುತ್ತೆ.
ವಿಶೇಷವಾಗಿ ಶುಕ್ರವಾರದ ಹೊತ್ತು ತುಪ್ಪದ ದೀಪ ಹಚ್ಚಿ ಇದನ್ನ ಪಠಿಸಿದ್ರೆ, ಮನೆಯಲ್ಲಿ ಶಾಂತಿ ನೆಲೆಸುತ್ತೆ. ಸಂಸಾರದಲ್ಲಿ ಬಿರುಕು ಬಿಟ್ಟಿದ್ರೆ, ಅದು ಮತ್ತೆ ಒಂದಾಗುತ್ತೆ.
ಕೊನೆಯ ಮಾತು
ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ, ಆದ್ರೆ ಅದಕ್ಕೆ ಬೇಕಾದ ದಾರಿಯನ್ನ ದೇವರು ಈ ಮಂತ್ರದ ಮೂಲಕ ತೋರಿಸ್ತಾನೆ. ವಯಸ್ಸು ಆಯ್ತು ಅಂತ ಚಿಂತೆ ಮಾಡ್ಬೇಡಿ, ಇವತ್ತಿನಿಂದಲೇ ಶ್ರದ್ಧೆಯಿಂದ ಜಪ ಮಾಡಿ.
ಆ ಪಾರ್ವತಿ ಪರಮೇಶ್ವರರ ಆಶೀರ್ವಾದದಿಂದ ನಿಮ್ಮ ಮನೆಯಲ್ಲೂ ಆದಷ್ಟು ಬೇಗ ಕಲ್ಯಾಣದ ಮಂತ್ರಾಕ್ಷತೆ ಬೀಳಲಿ.
Disclaimer
ಸೂಚನೆ: ಈ ಮಂತ್ರ ಮತ್ತು ಅದರ ಫಲಗಳು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಶ್ರದ್ಧೆಯಿಂದ ಪ್ರಾರ್ಥಿಸಿದರೆ ಒಳ್ಳೆಯದಾಗುತ್ತದೆ ಎಂಬುದು ಭಕ್ತರ ವಿಶ್ವಾಸ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಿವಾಹ ವಿಳಂಬಕ್ಕೆ ವ್ಯಯಕ್ತಿಕ ಮತ್ತು ಸಾಮಾಜಿಕ ಕಾರಣಗಳೂ ಇರಬಹುದು.




Leave a Feedback